ಯಶ್ ವಿರುದ್ಧ ಸಿಡಿದೆದ್ದ ಅಭಿಮಾನಿಗಳು, ಸುಮ್ಮನಿರಿ ಅಂದ ಕಿಚ್ಚಾ ಸುದೀಪ್

ಲೈವ್ ಕರ್ನಾಟಕ.ಕಾಂ

ಮೊನ್ನೆ ತಾನೆ ಕಿಚ್ಚಾ ಸುದೀಪ್ ಯಶ್ ಸೇರಿ ಇತರರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದರು. ಆ ಚಾಲೆಂಜ್ ಸ್ವೀಕರಿಸಿರುವ ಯಶ್ ಟ್ವಿಸ್ಟ್ ನೀಡುವ ಮೂಲಕ ಸುದೀಪ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ.

ಟ್ವೀಟರ್’ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಯಶ್, ಅದರಲ್ಲಿ “ಹಾಯ್ ಸುದೀಪ್” ಎಂದು ಕರೆದಿರುವ ಬಗ್ಗೆ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಿಮಗಿಂತ ದೊಡ್ಡವರು ಮೊದಲು ಗೌರವ ಕೊಡುವುದನ್ನು ಕಲಿ ಎಂದಿದ್ದಾರೆ. ಅಷ್ಟಕ್ಕೆ ನಿಲ್ಲಿಸದ ಅಭಿಮಾನಿಗಳು, ಯಶ್ ಫಿಟ್ನೆಸ್ ತೋರಿಸದೆ ಸ್ನೇಹಿತನಿಗೆ ಫಿಟ್ನೆಸ್ ಮಾಡಿಸುತ್ತಿರುವ ಬಗ್ಗೆ ಆಕ್ಷೇಪಿಸಿ ಟೀಕೆಗಳ ಸುರಿಮಳೆಗೈದಿದ್ದಾರೆ.

ಮಧ್ಯ ಪ್ರವೇಶಿಸಿರುವ ನಟ ಸುದೀಪ್, ಅಭಿಮಾನಿಗಳಿಗೆ ಸುಮ್ಮನಿರುವಂತೆ ಮನವಿ ಮಾಡಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

Leave a Reply

error: Content is protected !!