ನಿಮ್ಮ ದೇಹಕ್ಕೆ ಎಂಥಾ ಹಾಸಿಗೆ ಸೂಕ್ತ! ಲೇಖನ ಓದಿ ನಿರ್ಧರಿಸಿ

ಲೈವ್ ಕರ್ನಾಟಕ.ಕಾಂ

ಹಾಸಿಗೆ ಕೊಳ್ಳುವುದು ಸವಾಲಿನ ಕೆಲಸ. ಯಾಕೆಂದರೆ ಯಾವ ರೀತಿಯ ಹಾಸಿಗೆ ಕೊಳ್ಳಬೇಕು ಎನ್ನುವುದಕ್ಕೆ ವೈಜ್ಞಾನಿಕ ಮಾರ್ಗಗಳು ಇಲ್ಲದಿರುವುದೇ ಇದಕ್ಕೆ ಕಾರಣ. ಹಾಸಿಗೆಗಳನ್ನು ಬರೀ ಬಣ್ಣ, ಆಕರ್ಷಣೆ ನೋಡಿ ಕೊಳ್ಳಲು ಸಾಧ್ಯವಿಲ್ಲ. ದಿನವಿಡೀ ದುಡಿದು ದಣಿದಿರುವ ದೇಹಕ್ಕೆ ಆರಾಮದಾಯಕ ನಿದ್ರೆಗೆ ಹಾಸಿಗೆ ಬೇಕು. ಮಾರುಕಟ್ಟೆಗಳಲ್ಲಿ ದರಕ್ಕೆ ತಕ್ಕಂತ ಹಾಸಿಗೆಗಳು ಲಭ್ಯವಿದೆ. ಪ್ರತಿಷ್ಠಿತ ಕಂಪೆನಿಗಳ ಹಾಸಿಗೆಗಳನ್ನು ಕೊಳ್ಳುವುದರಿಂದ ಮಾತ್ರ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಬೇಡ. ದೇಹದ ಉಷ್ಣತೆ, ಹವಾಗುಣ, ಹಾಸಿಗೆ ಬಳಸಿರುವ ಉತ್ಪನ್ನಗಳೂ ಯಾವ ರೀತಿಯ ಹಾಸಿಗೆ ಸೂಕ್ತ ಎನ್ನುವುದನ್ನು ನಿರ್ಧರಿಸುತ್ತವೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹತ್ತಿಯ ಹಾಸಿಗೆ ಬಳಸುತ್ತಾರೆ. ನಗರ ಪ್ರದೇಶಗಳಲ್ಲಿ ಹತ್ತಿ, ಬಟ್ಟೆಗಳ ತುಂಡುಗಳು, ತೆಂಗಿನ ನಾರು ಮುಂತಾದ ಪದಾರ್ಥಗಳನ್ನು ಬಳಸಿ ಹಾಸಿಗೆ ತಯಾರಿಸುತ್ತಾರೆ. ಕೆಲ ಪದಾರ್ಥಗಳು ಕೆಲವರಿಗೆ ಅನುಕೂಲಕರವಾಗಿದ್ದರೆ, ಕೆಲವರಿಗೆ ಮೈ ನೋವು, ಬೆನ್ನು ನೋವು ಉಂಟು ಮಾಡುತ್ತವೆ. ಆದ್ದರಿಂದ ಹಾಸಿಗೆ ಕೊಳ್ಳುವ ಮುನ್ನ ಕೆಲ ಸಲಹೆಗಳನ್ನು ಪಾಲಿಸಿ.
ಅಂತರ್ಜಾಲದ ಸಹಾಯ ಪಡೆಯಿರಿ: ಹಾಸಿಗೆ ಕೊಳ್ಳಲು ಹೋಗುವ ಮುನ್ನ ಯಾವ ರೀತಿಯ ಹಾಸಿಗೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳ ಗುಣ, ವಿಶೇಷತೆಗಳ ಬಗ್ಗೆ ಅಂತರ್ಜಾಲದಲ್ಲಿ ತಿಳಿದುಕೊಳ್ಳಿ.

ನಿಮ್ಮ ಡಾಕ್ಟರ್‌ಗಳ ಸಲಹೆ ಪಡೆಯಿರಿ: ನಿಮ್ಮ ಸಮಸ್ಯೆ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿದಿರುತ್ತದೆ. ನಿಮ್ಮ ನೋವುಗಳಿಗೆ ಯಾವ ರೀತಿಯ ಸೂಕ್ತ ಎಂದು ನಿಮ್ಮ ವೈದ್ಯರಿಗೆ ತಿಳಿದಿರುತ್ತದೆ. ಡಾಕ್ಟರ್‌ಗಳು ನಿದ್ರೆಯ ಬಗ್ಗೆ ಪರಿಣಿತಿ ಹೊಂದಿರುವುದಿಲ್ಲ. ಆದರೆ ಯಾವ ರೀತಿಯ ಹಾಸಿಗೆ ತೆಗೆದುಕೊಂಡರೆ ಒಳಿತು ಎಂಬುದು ಅವರಿಗೆ ತಿಳಿದಿರುತ್ತದೆ. ವೈದ್ಯಕೀಯ ಸಲಹೆಗಳನ್ನು ಹಾಸಿಗೆ ಕೊಳ್ಳುವಾಗ ಪಾಲಿಸಿ.

ಯಾವ ರೀತಿಯ ಹಾಸಿಗೆ ಬೇಕು: ಬೆನ್ನು ನೋವು ಉಳ್ಳವರಿಗೆ ತುಂಬಾ ಗಟ್ಟಿಯಾದ ಹಾಸಿಗೆ ಒಳಿತಲ್ಲ. ಹಾಗೆಂದ ಮಾತ್ರಕ್ಕೆ ತುಂಬಾ ಮೃದುವಾದ ಹಾಸಿಗೆ ಕೂಡ ಒಳ್ಳೆಯದಲ್ಲ. ಬೆನ್ನು ನೋವು ಉಳ್ಳವರು ಹೆಚ್ಚು ಮೃದುವಲ್ಲದ ಕಡಿಮೆ ಗಟ್ಟಿ ಇರುವ ಹಾಸಿಗೆ ಖರೀದಿಸುವುದು ಒಳಿತು. ಆರಾಮದಾಯಕ ನಿದ್ರೆಗೆ ನಿಮ್ಮ ದೇಹಕ್ಕೆ ಸೂಕ್ತವಾದ ಮೃದು ಅಥವಾ ಗಟ್ಟಿ ಇರುವ ಹಾಸಿಗೆಯನ್ನು ನೀವೇ ಆಯ್ಕೆ ಮಾಡಬಹುದು. ಪಿಲ್ಲೋ ಟಾಪ್ ಹಾಸಿಗೆ ಎಲ್ಲರಿಗೂ ಸೂಕ್ತವಲ್ಲ. ತುಂಬಾ ತೆಳ್ಳಗಿರುವವರು ಈ ಮಾದರಿಯನ್ನು ಇಷ್ಟಪಡುವುದಿಲ್ಲ. ಕಡಿಮೆ ತೂಕದವರು ಇಂತಹ ಹಾಸಿಗೆ ಮೇಲೆ ಮಲಗುವುದರಿಂದ ಹಾಸಿಗೆ ಮೆತ್ತನೆ ಅನುಭವ ನೀಡುವುದಿಲ್ಲ. ಪಿಲ್ಲೋ ಟಾಪ್ ಹಾಸಿಗೆಯಲ್ಲಿ ಹೆಚ್ಚು ಕುಷನ್ ಹಾಕಿದ್ದು, ಕಡಿಮೆ ತೂಕ ಬಿದ್ದರೆ ಅದು ಕುಗ್ಗುವುದಿಲ್ಲ. ದಡೂತಿ ದೇಹದವರಿಗೆ ಈ ಹಾಸಿಗೆ ಆರಾಮವಾಗಿ ಕುಗ್ಗುತ್ತದೆ.

ದಿಂಬುಗಳ ಸ್ಪಂದನೆ ಮತ್ತು ಸೌಕರ್ಯ ಗಮನಿಸಿ: ತೂಕಕ್ಕೆ ಹೊಂದಿಕೊಳ್ಳುವಂತಹ ಹಾಸಿಗೆಗಳು ಹೆಚ್ಚು ಉತ್ತಮ. ಮಲಗಿದ ನಂತರ ನೀವು ಆರಾಮವಾಗಿ ಉಸಿರಾಡಲು ಮತ್ತು ಕೈಕಾಲು ಆಡಿಸಲು ಅವಕಾಶ ನೀಡುತ್ತವೆ. ಇದರಿಂದ ನಿಮ್ಮ ಬೆನ್ನಿನ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಜತೆಗೆ ದಿಂಬುಗಳನ್ನು ಹಾಕಿದಾಗಲೂ ಇದೇ ಅನುಭವ ನೀಡುತ್ತವೆಯೇ ಗಮನಿಸಿ.

ಹಣ ವಾಪಸ್ ಪಡೆಯುವ ಸೌಲಭ್ಯ ಇದೆಯೇ ಕೇಳಿ: ನಿಮಗೆ ಹಾಸಿಗೆಗಳು ಆರಾಮದಾಯಕವಾಗಿಲ್ಲದ ಸಂದರ್ಭದಲ್ಲಿ ಅವುಗಳನ್ನು ವಾಪಸ್ ನೀಡಿ ನಿಮ್ಮ ಹಣ ವಾಪಸ್ ಪಡೆಯುವ ಅವಕಾಶವಿದೆಯೇ ಕೇಳಿ ತಿಳಿಯಿರಿ. ಯಾಕೆಂದರೆ ನೀವು ಖರೀದಿಸುವ ಹಾಸಿಗೆ ಸೂಕ್ತವಾಗಿಲ್ಲದಿದ್ದಲ್ಲಿ ಅದನ್ನು ವಾಪಸ್ ನೀಡಲು ಅವಕಾಶಗಳು ಕೆಲವೇ ಮಾರಾಟಗಾರರಲ್ಲಿ ಇರುತ್ತವೆ. ಜತೆಗೆ ಕೆಲ ರಾಜ್ಯಗಳು ಈ ನಿಯಮವನ್ನು ಕೂಡ ಅಳವಡಿಸಿಕೊಂಡಿವೆ. ಅದಕ್ಕಾಗಿ ಆರಾಮದಾಯಕವಲ್ಲದಿದ್ದರೆ ವಾಪಸ್ ನೀಡುವ ಅವಕಾಶದ ಬಗ್ಗೆ ಕೇಳಿ ತಿಳಿಯಿರಿ. ಜತೆಗೆ ವಾಪಸ್ ನೀಡಲು ಅಥವಾ ಬದಲಾಯಿಸಿಕೊಳ್ಳಲು ನಿಗದಿಪಡಿಸಿರುವ ಸಮಯದ ಬಗ್ಗೆ ತಿಳಿದುಕೊಳ್ಳಿ.

ವಾರಂಟಿ ಚೆಕ್ ಮಾಡಿ: ಕೆಲ ಹಾಸಿಗೆಗಳಿಗೆ ಕನಿಷ್ಠ ೧೦ ವರ್ಷದ ಬದಲಾಯಿಸಬಲ್ಲ ಅವಕಾಶವಿರುತ್ತದೆ.

ಖರೀದಿಗೆ ಮುನ್ನ ೧೦ ನಿಮಿಷ ಮಲಗಿ: ಹಾಸಿಗೆ ಖರೀದಿಗೆ ಹೋದಾಗ ಹಾಸಿಗೆ ಎಲ್ಲ ಮೂಲೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಜತೆಗೆ ೧೦ರಿಂದ ೧೫ ನಿಮಿಷ ಅದರ ಮೇಲೆ ಮಲಗಿ ಪರೀಕ್ಷೆ ಮಾಡಿ. ಎಲ್ಲ ಮಗ್ಗಲುಗಳಲ್ಲೂ ಹೊರಳಾಡಿ ಅದರ ಸತ್ವ ಪರೀಕ್ಷೆ ಮಾಡಿ. ಅದು ನಿಮಗೆ ಆರಾಮದಾಯಕವಾಗಿದ್ದಲ್ಲಿ ಖರೀದಿ ಮಾಡಿ.
ದೊಡ್ಡ ಹಾಸಿಗೆ ಖರೀದಿಗೆ ಆದ್ಯತೆ ನೀಡಿ: ಇಬ್ಬರು ಆರಾಮವಾಗಿ, ಪಕ್ಕದಲ್ಲಿರುವವರಿಗೆ ತೊಂದರೆಯಾಗದಂತೆ ನಿದ್ರೆ ಮಾಡಲು ಹೆಚ್ಚು ಅಗಲವುಳ್ಳ ಹಾಸಿಗೆಗೆ ಆದ್ಯತೆ ನೀಡಿ.

ಅಳತೆ ಬಗ್ಗೆ ಕಾಳಜಿ ವಹಿಸಿ: ಹಾಸಿಗೆಗಳ ಅಳತೆ ಕಂಪೆನಿಯಿಂದ ಕಂಪೆನಿಗೆ ಬದಲಾಗುತ್ತವೆ. ಉದಾ: ಕಿಂಗ್ ಸೈಜ್ ಹಾಸಿಗೆಗಳು ಒಂದೇ ಅಳತೆ ಹೊಂದಿರುವುದಿಲ್ಲ.

ಉತ್ತಮ ಮಾರಾಟಗಾರರಲ್ಲಿ ಖರೀದಿಸಿ: ಉತ್ತಮ ಗುಣಮಟ್ಟದ ಹಾಸಿಗೆ ಮಾರಾಟ ಮಾಡುವವ ಬಳಿ ಖರೀದಿ ಮಾಡಿ. ಇದರಿಂದ ನಿಮಗೆ ಹಣ, ವಸ್ತುವಿನ ಮೇಲೆ ನಂಬಿಕೆ ಇಡಬಹುದು.

Leave a Reply

error: Content is protected !!