ವಾಟ್ಸಪ್’ಗೆ ಮಹತ್ವದ ಅಪ್’ಡೇಟ್, ಇನ್ಮುಂದೆ ಸಿಕ್ಕ ಸಿಕ್ಕ ಗ್ರೂಪ್’ಗೆಲ್ಲ ಮೆಸೇಜ್ ಫಾರ್ವರ್ಡ್ ಮಾಡೋಕಾಗಲ್ಲ

ಲೈವ್ ಕರ್ನಾಟಕ.ಕಾಂ | ವಾಟ್ಸಪ್

ದಿನದಿಂದ ದಿನಕ್ಕೆ ವಾಟ್ಸಪ್’ನ ಪ್ರಭಾವ ಹೆಚ್ಚಾಗುತ್ತಲೇ ಇದೆ. ಕೋಟಿ ಕೋಟಿ ಜನರು ವಾಟ್ಸಪ್ ಮೂಲಕ ಮೆಸೇಜುಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಳ್ಳು ಸುದ್ದಿಗಳು ಷೇರ್ ಆಗಿ, ಗೊಂದಲ, ಗದ್ದಲಕ್ಕೆ ಕಾರಣವಾಗುತ್ತಿದೆ. ಸಾವು, ನೋವುಗಳು ಸಂಭವಿಸುತ್ತಿವೆ. ಈ ಕಾರಣಕ್ಕೆ ವಾಟ್ಸಪ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಹಾಗಾಗಿ ವಾಟ್ಸಪ್ ಸಂಸ್ಥೆ ಆ್ಯಪ್’ಗೆ ಮಹತ್ವದ ಅಪ್’ಡೇಟ್ ಮಾಡಿದೆ. ಇದು ಅಂತಿಂಥಾ ಅಪ್’ಡೇಟ್ ಅಲ್ಲ.

ವಾಟ್ಸಪ್’ನ ಹೊಸ ಅಪ್’ಡೇಟ್ ಏನು?

ಒಂದೇ ಮೆಸೇಜನ್ನು ನೂರಾರು ಗ್ರೂಪ್’ಗಳಿಗೆ ಒಟ್ಟಿಗೆ ಫಾರ್ವರ್ಡ್ ಮಾಡಬಹುದಿತ್ತು. ಆದರೆ ಇನ್ಮುಂದೆ ಹಾಗೆ ಮಾಡೋಕೆ ಆಗೋದೇ ಇಲ್ಲ. ಫಾರ್ವರ್ಡ್ ಮೆಸೇಜುಗಳನ್ನು ಕೆಲವೇ ಕೆಲವು ಗ್ರೂಪ್’ಗಳಿಗಷ್ಟೇ ಫಾರ್ವರ್ಡ್ ಮಾಡಬಹುದು. ಇನ್ನು, ಫಾರ್ವರ್ಡ್ ಮೆಸೇಜುಗಳ ಮೇಲೆ Forwarded ಅಂತಾ ಕಾಣಿಸುತ್ತದೆ. ಇದಿಷ್ಟೇ ಅಲ್ಲಾ, ವಾಟ್ಸಪ್ ನಿಗದಿಪಡಿಸಿದ ಗ್ರೂಪ್’ಗಳ ಸಂಖ್ಯೆಗಿಂತಲೂ ಹೆಚ್ಚಿನ ಗ್ರೂಪ್’ಗಳಿಗೆ ಒಂದೇ ಮೆಸೇಜನ್ನು ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ.

ಎಷ್ಟು ಗ್ರೂಪ್’ಗಳಿಗೆ ಫಾರ್ವರ್ಡ್ ಮಾಡಬಹುದು?

ಹೊಸ ಅಪ್’ಡೇಟ್’ನಲ್ಲಿ ಇಡೀ ಜಗತ್ತಿಗೊಂದು ನಿಯಮ, ಭಾರತಕ್ಕೊಂದು ನಿಯಮವನ್ನು ವಾಟ್ಸಪ್ ರೂಪಿಸಿದೆ. ಇದೇ ಮೊದಲ ಬಾರಿಗೆ ಇಂತಹ ಕ್ರಮ ಕೈಗೊಳ್ಳಲಾಗಿದೆ. ಇನ್ನು, ಭಾರತದಲ್ಲಿ ಅತೀ ಹೆಚ್ಚು ವಾಟ್ಸಪ್ ಬಳಕೆದಾರರು ಇರುವುದರಿಂದಲೇ, ಇಲ್ಲಿಗೆ ಪ್ರತ್ಯೇಕ ರೂಲ್ಸ್ ಮಾಡಲಾಗಿದೆ. ಅಂದಹಾಗೆ, ಆ ರೂಲ್ಸ್ ಏನು ಗೊತ್ತಾ? ಜಗತ್ತಿನಾದ್ಯಂತ ಒಂದು ಫಾರ್ವರ್ಡ್ ಮೆಸೇಜನ್ನು 20 ಗ್ರೂಪ್’ಗಳಿಗೆ ಫಾರ್ವರ್ಡ್ ಮಾಡಬಹುದು. ಆದರೆ ಭಾರತಕ್ಕೆ ಈ ಕಂಡೀಷನ್ ಅಪ್ಲೈ ಆಗೋದೇ ಇಲ್ಲ. ಇಲ್ಲಿ, ಗ್ರೂಪ್’ಗಳ ಸಂಖ್ಯೆ ಕಡಿತಗೊಳಿಸಲಾಗಿದೆ. ಫಾರ್ವರ್ಡ್ ಮೆಸೇಜನ್ನು 5 ಗ್ರೂಪ್’ಗಳಿಗಷ್ಟೇ ಫಾರ್ವರ್ಡ್ ಮಾಡಬಹುದು.

ಹೆಚ್ಚು ಫಾರ್ವರ್ಡ್ ಮಾಡಿದರೆ ಏನಾಗುತ್ತದೆ?

ಭಾರತದಲ್ಲಿ ಐದು ಗ್ರೂಪ್’ಗಳಿಗಷ್ಟೇ, ಫಾರ್ವರ್ಡ್ ಮೆಸೇಜುಗಳನ್ನು ಕಳುಹಿಸಬಹುದು. ಅದಕ್ಕಿಂತಲೂ ಹೆಚ್ಚಿನ ಗ್ರೂಪ್’ಗಳಿಗೆ ಕಳುಹಿಸಲು ಸಾಧ್ಯವೇ ಇಲ್ಲ. ಯಾಕೆಂದರೆ, ವಾಟ್ಸಪ್’ನಲ್ಲಿ ಫಾರ್ವರ್ಡ್ ಮೆಸೇಜನ್ನು ಹೆಚ್ಚುವರಿ ಗ್ರೂಪ್’ಗೆ ಕಳುಹಿಸಿಲು ಪ್ರಯತ್ನಿಸಿದರೆ, ಮೆಸೇಜ್ ಕಳುಹಿಸಲು ಇರುವ ಬಟನ್, ವರ್ಕ್ ಆಗುವುದೇ ಇಲ್ಲ ಅಂತಾ ವಾಟ್ಸಪ್ ತಿಳಿಸಿದೆ.

Leave a Reply

error: Content is protected !!