ಭಾರತದ ಈ ಆನೆಯನ್ನು ಅಮೇರಿಕಾದಲ್ಲಿ ಯಾಕೆ ನೇಣು ಹಾಕಿದ್ರು ಅಂಥ ಕೇಳಿದ್ರೆ, ನೀವು ಬೆಚ್ಚಿ ಬೀಳ್ತಿರಾ

ಲೈವ್‍ಕರ್ನಾಟಕ.ಕಾಂ

ಆನೆಯನ್ನೂ ನೇಣು ಹಾಕ್ತಾರಾ ಎಂಬ ವಿಷಯ ನಾವು ಊಹಿಸಿಕೊಳ್ಳೋಕು ಸಾಧ್ಯವಿಲ್ಲ. ಎಂತಹ ಪ್ರಾಣಿಗಳನ್ನು ಪಳಗಿಸುವ ಶಕ್ತಿ ಇರುವ ಮನುಷ್ಯನಿಗೆ ಈ ಆನೆ ಅಂಥ ತೊಂದರೆ ಏನು ಕೊಟ್ಟಿತ್ತು ಎಂದು ನೀವು ಕೇಳಬಹುದು. 1894ರಲ್ಲಿ ಜನಿಸಿದ ಏಷ್ಯಾ ಖಂಡದ ಹೆಣ್ಣಾನೆ ಅಮೇರಿಕಾದ ಸ್ಪಾಕ್ರ್ಸ್ ವಲ್ರ್ಡ್ ಫೇಮಸ್ ಸರ್ಕಸ್ ಕಂಪೆನಿ ಸೇರಿ ಮೇರಿ ಎಂಬ ಹೆಸರು ಪಡೆದುಕೊಂಡಿತ್ತು. ಹೀಗೆ ಸರ್ಕಸ್ ಕಂಪೆನಿ ಸೇರಿದ ಆನೆ ತನ್ನ ತುಂಟಾಟಗಳೊಂದಿಗೆ ಎಲ್ಲರ ಮನೆ ಮಾತಾಗಿತ್ತು. ದೃಢಕಾಯದ ಈ ಆನೆ ಸರ್ಕಸ್‍ನಲ್ಲೇ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಒಂದು ದಿನ ಹೊಸದಾಗಿ ಸರ್ಕಸ್ ಸೇರಿದ ನೌಕರನೊಬ್ಬ ಮಾಡಿದ ತಪ್ಪು ಆನೆಯನ್ನೇ ಬಲಿ ಪಡೆಯಿತು.
ಅಮೆರಿಕಾದ ಸುಲ್ಲಿವನ್ ಟೆನ್ನೆಸ್ಸೇಯಲ್ಲಿ ಸೆಪ್ಟೆಂಬರ್ 11, 1916ರಂದು ನಡೆಯುತ್ತಿದ್ದ ಸರ್ಕಸ್‍ಗೆ ಅನಾಥ ರೆಡ್ ಎಲ್‍ಡ್ರಿಜ್ಡ್ ಎಂಬಾತ ಕೆಲಸಕ್ಕೆ ಸೇರಿಕೊಂಡ. ಸರ್ಕಸ್ ಬಗ್ಗೆ ಏನು ತಿಳಿಯದ ಆತನಿಗೆ ಆನೆಗಳನ್ನು ಪಳಗಿಸುವ ವ್ಯಕ್ತಿಗೆ ಅಸಿಸ್ಟೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆತನಿಗೆ ಆನೆ ಏರಿ ನಿಯಂತ್ರಿಸುವ ಕೆಲಸ ಕೊಡಲಾಗಿತ್ತು. ಸೆ.12ರಂದು ಮೇರಿಯು ದಾರಿಯಲ್ಲಿ ಸಾಗುವಾಗ ಕಲ್ಲಂಗಡಿಗೆ ಬಾಯಿ ಹಾಕಲು ಮುಂದಾಗಿತ್ತು ಇದನ್ನು ಕಂಡ ರೆಡ್ ಮೇರಿಯ ಕಿವಿ ಪಕ್ಕ ಭರ್ಜಿಯಂದ ಜೋರಾಗಿ ಚುಚ್ಚಿದ ಇದರಿಂದ ಕೆರಳಿದ ಮೇರಿ ಆತನನ್ನು ಸೊಂಡಲಿನಲ್ಲಿ ಹಿಡಿದು ಹತ್ತು ಅಡಿ ಮೇಲೆ ಎಸೆದು ಬೀಳಿಸಿತು. ಅಷ್ಟಕ್ಕೆ ಸುಮ್ಮನಾಗದೆ ಕಾಲಿನಲ್ಲಿ ತಲೆಯನ್ನು ತುಳಿದು ಸಾಯಿಸಿದೆ.


ಇದರಿಂದ ಕುಪಿತಗೊಂಡ ಸರ್ಕಸ್ ಮಾಲೀಕ ಇದನ್ನು ನಿಯಂತ್ರಿಸಲು ಆಗುವುದಿಲ್ಲ ನೇಣಿಗೆ ಹಾಕಲೇಬೇಕೆಂದು ತಿಳಿಸಿದ ಹಿನ್ನೆಲೆ ಅದನ್ನು ಸೆಪ್ಟೆಂಬರ್ 13, 1916ರಂದು ಟೆನ್ನೆಸ್ಸೆಸ್‍ಗೆ ರೈಲಿನಲ್ಲಿ ಕರೆತಂದು ನೇಣಿಗೆ ಹಾಕಲಾಯಿತು. ಇದಕ್ಕೆ 2500 ಮಂದಿ ಸಾಕ್ಷಿಯಾಗಿದ್ದರು.
ಒಂದು ಬೃಹತ್ ಕ್ರೇನ್ ತಂದು ಆನೆಗೆ ದಪ್ಪ ಹಗ್ಗದಿಂದ ಕುಣಿಕೆ ಹಾಕಿ ನೇಣಿಗೆ ಏರಿಸಲಾಯಿತು. 4500 ಕೆಜಿ ತೂಕದ ಆನೆ ಭಾರಕ್ಕೆ ಕ್ರೇನ್ ಒದ್ದಾಡಿದ ಹಿನ್ನೆಲೆ ಮತ್ತೊಂದು ಕ್ರೇನ್ ತಂದು ಮತ್ತೊಂದು ಕುಣಿಕೆ ಹಾಕಿ ಸಾಯುವವರೆಗೆ ಅಲ್ಲೇ ಬಿಡಲಾಯಿತು.

Leave a Reply

error: Content is protected !!