ಉದ್ಯಮಿಯ ಮಗನ ಮೇಲೆ ಹಲ್ಲೆ ಕೇಸ್, ಶರಣಾಗುತ್ತಾನಂತೆ ಶಾಸಕ ಹ್ಯಾರೀಸ್ ಮಗ

ಲೈವ್ ಕರ್ನಾಟಕ.ಕಾಂ | ಬೆಂಗಳೂರು

ರೆಸ್ಟೋರೆಂಟ್‍ನಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಶಾಸಕ ಹ್ಯಾರೀಸ್ ಪುತ್ರ ಮಹಮ್ಮದ್‍ ನಳಪಾಡ್ ಶರಣಾಗಲಿದ್ದಾನೆ. ನಾನೇ ಖುದ್ದಾಗಿ ಆತನನ್ನು ಸ್ಟೇಷನ್‍ಗೆ ಕರೆದೊಯ್ದು ಸರೆಂಡರ್ ಮಾಡಿಸುತ್ತೇನೆ.

ಹೀಗಂತಾ, ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ ಶಾಸಕ ಹ್ಯಾರೀಸ್‍. ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹ್ಯಾರೀಸ್, ಗಲಾಟೆ ಬಳಿಕ ನಾನು ಫೋನ್ ಮಾಡಿ ಬೈದಿದ್ದಕ್ಕೆ ಮಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ರಾತ್ರಿ ತಾಯಿಯ ಜೊತೆಗೆ ಮಾತನಾಡಿದ್ದಾನೆ. ಅದಾದ ನಂತರ ಮತ್ತೆ ನಾನು ಸಂಪರ್ಕ ಮಾಡಿ, ಪೊಲೀಸರಿಗೆ ಸರೆಂಡರ್ ಆಗು ಅಂತಾ ತಿಳಿಸಿದ್ದೇನೆ. ಈಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಶರಣಾಗುವಂತೆ ತಿಳಿಸಿದ್ದೇನೆ.

ಯಾರಾರು ಏನೇನೆಲ್ಲ ಮಾತನಾಡಿದ್ದಾರೆ ಗೊತ್ತು

ಹುಡುಗರ ಗಲಾಟೆಯನ್ನು ಚುನಾವಣೆ ಸಂದರ್ಭ ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗಮನಿಸಿದ್ದೇನೆ. ಯಾವ್ಯಾವ ರಾಜಕಾರಣಿಗಳ ಮಕ್ಕಳು ಏನೇನೆಲ್ಲ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ. ಆಗೆಲ್ಲ ನಾನು ಏನನ್ನು ಮಾತನಾಡಿಲ್ಲ. ಚುನಾವಣೆ ಸಮೀಪದಲ್ಲಿದೆ ಎಂಬ ಕಾರಣಕ್ಕೆ ಹೇಗೆಲ್ಲ ಮಾತನಾಡುತ್ತಿದ್ದಾರೆ ಅನ್ನುವುದನ್ನು ಗಮನಿಸಿದ್ದೇನೆ. ಆದರೆ ನನ್ನ ಮಗನಿಗೆ ಶರಣಾಗುವಂತೆ ಸೂಚನೆ ಕೊಟ್ಟಿದ್ದೇನೆ. ಅದ್ದರಿಂದ ಮಗ ಶರಣಾಗುತ್ತಾನೆ.

ಬಿಲ್ಡಪ್ ಕೊಡಬೇಡಿ, ಸಣ್ಣದನ್ನು ದೊಡ್ಡದಾಗಿಸಬೇಡಿ

ಮಾಧ್ಯಮಗಳಲ್ಲಿ ಘಟನೆ ಕುರಿತು ತುಂಬಾ ಬಿಲ್ಡಪ್ ಕೊಡಲಾಗುತ್ತಿದೆ ಎಂದು ಶಾಸಕ ಹ್ಯಾರೀಸ್ ಬೇಸರ ವ್ಯಕ್ತಪಡಿಸಿದರು. ಅಲ್ಲದೇ, ಉದ್ಯಮಿಯ ಮಗನ ಮೂಗಿಗೆ ಸಣ್ಣದೊಂದು ಗಾಯವಾಗಿದೆ. ಆದರೆ ಮೂಗು ಸಂಪೂರ್ಣ ಮುರಿದು ಹೋಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಸ್ಕ್ಯಾನಿಂಗ್ ಆಗುವ ಸಂದರ್ಭ, ನಾನು ಅಲ್ಲೇ ಇದೆ. ಈಗ ನನ್ನ ಮಾತನ್ನು ನೀವು ಹೇಗೆಲ್ಲ ಬಿಲ್ಡಪ್ ಕೊಡುತ್ತೀರೋ ಅನ್ನುವುದನ್ನು ಯೋಚನೆ ಮಾಡಿಕೊಂಡು ಮಾತನಾಡಬೇಕಾಗಿದೆ ಎಂದು ಹ್ಯಾರೀಸ್ ತಿಳಿಸಿದರು.

Leave a Reply

error: Content is protected !!