ಲೆನೋವೋದಿಂದ 25 ಗಂಟೆ ಬ್ಯಾಟರಿ ಬ್ಯಾಕಪ್ ಲ್ಯಾಪ್‍ಟಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ

ಲೈವ್‍ಕರ್ನಾಟಕ.ಕಾಂ

ಲ್ಯಾಪ್‍ಟಾಪ್ ಬಳಕೆದಾರರಿಗೆ ಮೇಜರ್ ಪ್ರಾಬ್ಲಂ ಎಂದರೆ ಬ್ಯಾಟರಿ ಪ್ರಾಬ್ಲಂ. ಇಂಟರ್‍ನೆಟ್ ಬಳಕೆದಾರರು ಚಾರ್ಜ್‍ಗೆ ಹಾಕಿಕೊಂಡೆ ಲ್ಯಾಪ್‍ಟಾಪ್ ಬಳಸಬೇಕು. ಇಲ್ಲವಾದರೆ ಒಂದೆರಡು ಗಂಟೆಯಲ್ಲಿ ಬ್ಯಾಟರಿ ಖಾಲಿ ಆಗುತ್ತದೆ. ಇಂತಹ ಸಮಸ್ಯೆಗೆ ಮುಕ್ತಿ ಆಡಲೆಂದೆ ಲೆನೋವೋ ಕಂಪೆನಿ 25 ಗಂಟೆ ಬ್ಯಾಟರಿವುಳ್ಳ ಲ್ಯಾಪ್‍ಟಾಪ್ ಲಾಂಚ್ ಮಾಡಿದೆ. ಅದರ ಹೆಸರೆ Lenovo Yoga C630 WOS. ವಿಂಡೋಸ್ 10 ಆಪರೇಟಿಂಗ್ ಸಾಫ್ಟ್‍ವೇರ್ ಕೂಡ ಇರುತ್ತದೆ. ಇದರ ಅಂದಾಜು ದರ 999 ಯುರೋ ಅಂದರೆ ಭಾರತದ ರೂಪಾಯಿ  80,000 ಆಗಬಹುದು.
ನವೆಂಬರ್‍ಗೆ ಇದು ಮಾರ್ಕೆಟ್‍ಗೆ ಬರಲಿದ್ದು ಯುರೋಪ್ ಮತ್ತು ಇತರೆ ದೇಶಗಳಲ್ಲಿ ಲಭ್ಯವಿರಲಿದೆ. ಭಾರತದಲ್ಲಿ ಯಾವಾಗ ಸಿಗಲಿದೆ ಎಂಬ ಬಗ್ಗೆ ಕಂಪೆನಿ ಸ್ಪಷ್ಟಪಡಿಸಿಲ್ಲ.

Leave a Reply

error: Content is protected !!