ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಲೈವ್ ಕರ್ನಾಟಕ.ಕಾಂ | ಬೆಂಗಳೂರು

ನಟ, ನಿರ್ದೇಶಕ, ಸ್ಯಾಂಡಲ್​ವುಡ್​ನ ಮೇರು ಪ್ರತಿಭೆ ಕಾಶಿನಾಥ್ ನಿಧನರಾಗಿದ್ದಾರೆ. ಕ್ಯಾನ್ಸರ್​ಗೆ ಖಾಯಿಲೆಯಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಇಂದು ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನದ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ವಿಧಿವಶರಾಗಿದ್ದಾರೆ.

ಹಿರಿಯ ನಟ ಕಾಶೀನಾಥ್ ಅವರನ್ನು ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾಶಿನಾಥ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಸ್ಟಾರ್​ ನಟರು ಅಭಿನಯಿಸಿದ್ದ ಚೌಕ ಚಿತ್ರದಲ್ಲಿ ಕಾಶೀನಾಥ್ ಅಭಿನಯಿಸಿದ್ದರು. ಬಹು ವರ್ಷದ ಬಳಿಕ ಸ್ಯಾಂಡಲ್​ವುಡ್​ಗೆ ಕಮ್​ ಬ್ಯಾಕ್ ಮಾಡಿದ್ದರು.

Leave a Reply

error: Content is protected !!