ಮಗಳ ಮೊದಲ ಸಿನಿಮಾ ಇಂದು ತೆರೆಗೆ, ನೋಡೋಕೆ ತಾಯಿಯೇ ಇಲ್ಲ

ಲೈವ್‍ಕರ್ನಾಟಕ.ಕಾಂ

ಕಪೂರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗ ಪ್ರವೇಶಿಸುತ್ತಿದ್ದು, ಇದನ್ನು ನೋಡಲು ತಾಯಿ ಶ್ರೀದೇವಿ ಈಗ ಇಲ್ಲ ಎಂಬ ಕೊರಗು ಮಗಳು ಜಾಹ್ನವಿ ಕಪೂರ್‍ಗೆ ಕಾಡುತ್ತಿದೆ. ಭಾರತದ ಖ್ಯಾತ ನಟಿ ಶ್ರೀದೇವಿ ಈಚೆಗೆ ಮೃತಪಟ್ಟಿದ್ದರು. ಇದಾದ ನಂತರ ಮಗಳು ಜಾಹ್ನವಿ ಕಪೂರ್ ಮೊದಲ ಬಾರಿಗೆ ದಡಕ್ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಶುಕ್ರವಾರ ದೇಶಾದ್ಯಂತ ತೆರೆ ಕಂಡಿದ್ದು 2016ರಲ್ಲಿ ತೆರೆಕಂಡ ಮರಾಠಿ ಸಿನಿಮಾ ಸೈರಾಠ್‍ನ ರಿಮೇಕ್ ಇದು.
ಕರಣ್ ಜೋಹರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಲಿಯಾಭಟ್, ವರುಣ್ ಧವನ್ ಮುಂತಾದವರನ್ನು ಪರಿಚಯಿಸಿದ ಕೀರ್ತಿ ಕರಣ್ ಜೋಹರ್‍ಗೆ ಸಲ್ಲುತ್ತದೆ.
ರೂಪದರ್ಶಿಯಾಗಿ ಈಗಾಗಲೇ ಯಶಸ್ಸು ಕಂಡಿರುವ ಜಾಹ್ನವಿಗೆ ಪ್ರೇಕ್ಷಕರು ಎಷ್ಟು ಮಾಕ್ರ್ಸ್ ಕೊಡುತ್ತಾರೆ ಕಾದು ನೋಡಬೇಕಿದೆ

Leave a Reply

error: Content is protected !!