ಒಂದೇ ಬೈಕ್​​ನಲ್ಲಿ 58 ಕಮಾಂಡೋಗಳ ರೈಡ್, ಬೆಂಗಳೂರಿನಲ್ಲಿ ನಡೆಯಿತು ಮೈ ಜುಮ್ ಅನಿಸುವ ಸಾಹಸ

ಬೆಂಗಳೂರು : ಭಯಾನಕ ಸ್ಟಂಟ್​ಗಳನ್ನು ಮಾಡುವುದಕ್ಕೆ ಹೆಸರಾಗಿರುವ ಇಂಡಿಯನ್ ಆರ್ಮಿಯ ಟೊರ್ನಾಡೋ ಟೀಮ್, ಮತ್ತೊಂದು ದಾಖಲೆ ಮಾಡಿದೆ. ಇದು ಅಂತಿಂಥಾ ರೆಕಾರ್ಡ್ ಅಲ್ಲ. ಊಹಿಸಿಕೊಳ್ಳುವುದಕ್ಕೇ ಕಷ್ಟ. ಇದನ್ನು ಕಲ್ಪಿಸಿಕೊಂಡರೆ ಮೈ ಜುಮ್ ಅನ್ನುತ್ತೆ.

ಟೊರ್ನಾಡೋ ಟೀಮ್​ನ 58 ಕಮಾಂಡೋಗಳು ರೋಚಕ ಸಾಹಸದಲ್ಲಿ ಮಾಡಿದ್ದಾರೆ. ಇವರೆಲ್ಲ ಒಟ್ಟಿಗೆ ಒಂದೇ ಬೈಕ್​ನಲ್ಲಿ ಪ್ರಯಾಣ ಮಾಡಿದ್ದಾರೆ. ಇದು ಈಗ ವರ್ಲ್ಡ್​ ರೆಕಾರ್ಡ್ ಆಗಿದೆ. ಇನ್ನು, ಇವರು ಮಾಡಿದ ಸಾಹಸ ಹೇಳಿದಷ್ಟು ಸುಲಭವಲ್ಲ. ಟೀಮ್​ನಲ್ಲಿ ಯಾರಾದರೂ ಒಬ್ಬರು ಸಣ್ಣ ತಪ್ಪು ಮಾಡಿದರೂ, ಒಂದೇ ಒಂದು ಸೆಕೆಂಡ್ ಎಡವಿದರೂ ಮುಗಿಯಿತು, ದೊಡ್ಡ ಅನಾಹುತ ನಿಶ್ಚಿತ. ಇಂತಾ ಸಾಹಸವನ್ನು ಟೊರ್ನಾಡೋ ಟೀಮ್ ನಿರಾಯಾಸವಾಗಿ ಮಾಡಿದೆ.

ಬೆಂಗಳೂರಿನಲ್ಲೇ ನಡೆಯಿತು ದಾಖಲೆಯ ಬೈಕ್ ರೈಡ್

ಯಲಹಂಕದಲ್ಲಿರುವ ಏರ್​​ಫೋರ್ಸ್​ನ ಹೈಸೆಕ್ಯೂರಿಟಿ ವಾಯುನೆಲೆಯಳಗೇ, ಟೊರ್ನಾಡೋ ಟೀಮ್​ನ ದಾಖಲೆ ಸಾಹಸ ಪ್ರದರ್ಶನ ನಡೆದಿದ್ದು. 500 ಸಿಸಿ ರಾಯಲ್ ಎನ್​ಫೀಲ್ಡ್​ ಮೊಟಾರ್ ಸೈಕಲ್​ನಲ್ಲಿ 58 ಕಮಾಂಡೋಗಳು ಹತ್ತಿ, 1200 ಮೀಟರ್​ ಪ್ರಯಾಣ ಮಾಡಿದರು.

ಮೇಜರ್ ಬನ್ನಿ ಶರ್ಮಾ ನೇತೃತ್ವದಲ್ಲಿ ಟೊರ್ನಾಡೋ ಟೀಮ್ ಈ ಭಯಾನಕ ರೈಡ್ ಮಾಡಿತು. ಇದರ ವಿಡಿಯೋ ನೋಡಿದರೆ ಮೈ ಜುಮ್ ಅನ್ನುವುದು ನಿಶ್ಚಿತ. (WATCH VIDEO : Indian Army Tornadoes Motorcycle Team | 58 men on 500cc Royal Enfield)

ಟೊರ್ನಾಡೋಗಳಿಗೆ ಇದೇನು ಹೊಸತಲ್ಲ

ಇಂಡಿಯನ್ ಆರ್ಮಿಯ ಟೊರ್ನಾಡೋ ತಂಡವೇ ಹಾಗೆ. ಸಾಹಸದ ಮೇಲೆ ಸಾಹಸ ಮಾಡುವುದು ಈ ಟೀಮ್​ಗೆ ನೀರು ಕುಡಿದಷ್ಟು ಸಲೀಸು. ಇದೇ ಕಾರಣಕ್ಕೆ ಟೊರ್ನಾಡೋ ಟೀಮ್​ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡಿದೆ. ಬರೋಬರಿ 7 ಗಿನ್ನೀಸ್ ರೆಕಾರ್ಡ್ ಈ ತಂಡದ ಹೆಸರಲ್ಲಿದೆ. ಒಂದು ಡಜನ್ ಲಿಮ್ಕಾ ದಾಖಲೆಯೂ ಈ ಟೀಮ್​​ನ ಮುಡಿಗೇರಿದೆ.

1982ರಲ್ಲಿ ಟೊರ್ನಾಡೋ ಟೀಮ್ ಆಸ್ತಿತ್ವಕ್ಕೆ ಬಂತು. ಕರ್ನಲ್ ಸಿ.ಎನ್​.ರಾವ್ ಮತ್ತು ಕ್ಯಾಪ್ಟನ್ ಜೆಪಿ ವರ್ಮಾ ಅವರ ಸಾರಥ್ಯದಲ್ಲಿ ಆರಂಭವಾದ ಸಾಹಸ ಯಾತ್ರೆ, ಇವತ್ತಿಗೂ ಕಂಟಿನ್ಯೂ ಆಗಿದೆ. ಇನ್ನು, ಈ ಭಯಾನಕ ಸಾಹಸಗಳಿಂದಾಗಿಯೇ ಈ ಟೀಮ್​ಗೆ ಟೊರ್ನಾಡೋ ಅನ್ನುವ ಹೆಸರು ಬಂದಿದ್ದು. ಟೊರ್ನಾಡೋ ಅಂದರೆ, ಸುಂಟರಗಾಳಿ ಎಂಬ ಅರ್ಥವಿದೆ. ವಿಶೇಷ ಅಂದರೆ, ಇಂಡಿಯನ್ ಆರ್ಮಿಯ ಟೊರ್ನಾಡೋ ಟೀಮ್​, ದೇಶ, ವಿದೇಶದಲ್ಲೂ ಸಾಹಸಗಳನ್ನು ಮಾಡಿ, ಭಾರತದ ಕೀರ್ತಿಪಥಾಕೆ ಹಾರಿಸುತ್ತಿದೆ. ಅಲ್ಲದೆ, ಇಂಡಿಯನ್ ಆರ್ಮಿಯ ಬಗ್ಗೆ ವಿದೇಶಿಯರಲ್ಲಿ, ಅಲ್ಲಿಯ ಆರ್ಮಿ ಟ್ರೂಪ್​ಗಳಲ್ಲಿ ಆಸಕ್ತಿ ಮೂಡಿಸುತ್ತಿದೆ.

Leave a Reply

error: Content is protected !!