ಬೈಕ್ ಇನ್ಶೂರನ್ಸ್ ಪಡೆಯೋಕೆ ಇಷ್ಟು ಮಾಡಿ ಸಾಕು

ಲೈವ್ ಕರ್ನಾಟಕ.ಕಾಂ

ಇನ್ಶೂರನ್ಸ್ ಮಾಡಿಸುವುದು ಸುಲಭ. ಆದರೆ ತುರ್ತು ಸಂದರ್ಭದಲ್ಲಿ ಪಡೆಯವುದು ತುಂಬಾ ಕಷ್ಟ ಅನ್ನುವ ಮಾತಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ನಾನಾ ಇನ್ಶೂರನ್ಸ್ ಕಂಪೆನಿಗಳು ಗ್ರಾಹಕ ಸ್ನೇಹಿಯಾಗಿ ವರ್ತಿಸಲು ಶುರು ಮಾಡಿದ್ದು, ಇನ್ಶೂರನ್ಸ್ ಹಣ ಪಡೆಯಲು ಪ್ರತ್ಯೇಕ ವಿಭಾಗ ತೆಗೆದು ವ್ಯವಸ್ಥೆ ಮಾಡಿವೆ.

ನೀವು ಅಥವಾ ನಿಮ್ಮ ಸಂಬಂ ಯಾವುದೋ ಕೆಲಸದ ನಿಮಿತ್ತು ಪಟ್ಟಣದ ಕಡೆ ತೆರಳುತ್ತಿರುತ್ತೀರಾ. ಆ ಸ್ಥಳ ದೂರ ಇರುವ ಕಾರಣ ನೀವು ಜೋರಾಗಿ ಬೈಕ್ ಓಡಿಸುತ್ತಿರುತ್ತೀರಿ. ತಕ್ಷಣ ಯಾವುದೋ ಕಾರು ರೋಡ್ ಕ್ರಾಸ್ ಮಾಡಲು ನುಗುತ್ತಿರುತ್ತದೆ. ನೀವು ಎಷ್ಟೇ ಪ್ರಯತ್ನಿಸಿದರೂ ಆ ಕಾರಿಗೆ ಡಿಕ್ಕಿ ಹೊಡೆಯುತ್ತೀರಾ. ಹೀಗೆ ಅಪಘಾತಗಳು ತಕ್ಷಣಕ್ಕೆ ನಡೆದು ಹೋಗುತ್ತವೆ. ಅದರಲ್ಲಿ ಪ್ರಾಣ ಹೋದರೂ ಅಚ್ಚರಿ ಇಲ್ಲ. ಪ್ರಾಣ ಹೋದರೂ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವುದು ನೀವು ಮಾಡಿಸಿದ ಜೀವ ವಿಮೆ. ಇದು ಅಪಘಾತದ ಉದಾಹರಣೆಯಾದರೆ ಸಹಜ ಸಾವುಗಳು ನಾನಾ ರೀತಿ ಸಂಭವಿಸುತ್ತವೆ. ಅದು ಅನಾರೋಗ್ಯದಿಂದ, ಸಿಡಿಲು ಬಡಿದು, ವಿಷ ಜಂತುಗಳಿಂದ, ದೋಣಿ ಮುಳುಗಿ, ಪ್ರವಾಹ ಸಂಭವಿಸಿ ಹೀಗೆ ಅನೇಕ ರೀತಿಯಲ್ಲಿ ಸಂಭವಿಸಬಹುದು. ಜೀವ ವಿಮೆ ಪಡೆಯಲು ಸಾವು ಬರಲೇ ಬೇಕಿಲ್ಲ. ವಿಮೆ ಅವಧಿಯು ಮುಗಿದಿದ್ದರೂ ಪಾಲಿಸಿ ಹಣ ಪಡೆಯಬಹುದು.

ಭಾರತದಲ್ಲಿ ಅತಿ ಹೆಚ್ಚು ಮಂದಿ ಜೀವ ವಿಮೆ ಮಾಡಿಸಿದ್ದಾರೆ. ಮಧ್ಯಮ ವರ್ಗದ, ಶ್ರೀಮಂತ ವರ್ಗದ ಬಹುತೇಕ ಮಂದಿ ವಿಮೆಗೆ ಒಳಗಾಗಿದ್ದಾರೆ. ಆದ್ದರಿಂದ ವಿಮೆ ಕಂಪೆನಿಗಳು ನಾನಾ ರೀತಿಯ ವಿಮೆಗಳನ್ನು ನಾಗರಿಕರಿಗೆ ಒದಗಿಸುತ್ತಿವೆ. ವಿಮೆ ನೀಡಬೇಕಾದಾಗ ಇರುವ ಸೌಜನ್ಯ, ಪಾಲಿಸಿ ಹಣ ಪಡೆಯಲು ಹೋದಾಗ ಇರುವುದಿಲ್ಲ ಎಂಬ ಆರೋಪವಿದೆ. ಈ ವಿಮೆ ಹಣ ಪಡೆಯುವಾಗ ಅದರಲ್ಲೂ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರಿಗೆ ಏನು ಮಾಡಬೇಕು ತಿಳಿಯುವುದಿಲ್ಲ. ಈ ಸಂದರ್ಭದಲ್ಲಿ ಜೀವ ವಿಮೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕಾದ ಸಲಹೆಗಳು ಇಂತಿವೆ.

 • ವಿಮೆ ಕಂಪೆನಿಗೆ ಮಾಹಿತಿ ನೀಡಿ. ವಿಮೆ ಕಂಪೆನಿಗೆ ಕರೆ ಮಾಡಿ ಅಥವಾ ಅವರ ಕಾಲ್‌ಸೆಂಟರ್‌ಗೆ ಕರೆ ಮಾಡಿ ಅಥವಾ ಹತ್ತಿರದ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ನೀಡಬಹುದು. ಪಾಲಿಸಿ ಮಾಡಿಸಿದ ಏಜೆಂಟ್ ಜತೆ ಸಂಪರ್ಕದಲ್ಲಿ ಇದ್ದರೆ ಒಳ್ಳೆಯದು. ಪಾಲಿಸಿಯ ವಿವರವನ್ನು ಹೊಂದಿರುವುದು ಅವಶ್ಯಕ.
 • ನಾಮನಿರ್ದೇಶಿತರಿಂದ ವಿಮೆ ವಾರಸುದಾರರ ಹೇಳಿಕೆಯನ್ನು ಪಡೆಯವುದು. ಅಂದರೆ, ವಿಮೆ ಕಂಪೆನಿ ನೀಡಿರುವ ನಾಮಿನಿ ದಾಖಲೆಗಳು. ಅಪಘಾತ ಪ್ರಕರಣದಲ್ಲಿ ಎಫ್ಐಆರ್, ಪೋಸ್ಟ್ ಮಾರ್ಟಮ್ ರಿಪೋರ್ಟ್ ಒದಗಿಸಬೇಕು. ವೈದ್ಯಕೀಯ ವಿಮೆಯಾದ್ದಲ್ಲಿ ವೈದ್ಯಕೀಯ ಚಿಕಿತ್ಸೆ ದಾಖಲೆಗಳು, ಬಿಲ್‌ಗಳು, ಡಿಸ್ಚಾರ್ಜ್ ರಿಪೋರ್ಟ್ ಮುಂತಾದವುಗಳನ್ನು ಹೊಂದಿರಬೇಕು.
 • ವಿಮೆ ಕಂಪೆನಿ ವೌಲ್ಯಮಾಪನ ಪ್ರಾರಂಭಿಸಿದಾಗ ಅವರಿಗೆ ಮಾಹಿತಿ ಸರಿ ಎನಿಸದಿದ್ದಲ್ಲಿ ಮಾಹಿತಿಯ ನಿಖರತೆಗೆ ಇನ್ನೂ ಹೆಚ್ಚಿನ ತನಿಖೆ ಮಾಡಬಹುದು.
 • ಎಲ್ಲ ದಾಖಲೆಗಳ ಒದಗಿಸದ ನಂತದ ನಿಮ್ಮ ಇನ್ಶೂರನ್ಸ್ ಹಣ ನೀಡಲಾಗುವುದು. ದಾಖಲೆ ಪರಿಶೀಲಿಸಿದ 30 ದಿನದೊಳಗೆ ನಿಮಗೆ ವಿಮೆ ಹಣ ಸಿಗುತ್ತದೆ. ಆದರೆ ವಿಶೇಷ ಪ್ರಕರಣಗಳಲ್ಲಿ ಇದು ನಿಧಾನಗತಿಯಲ್ಲಿ ಸಾಗುವುದು.
 • ವಿಮೆದಾರರು ವಿದೇಶದಲ್ಲಿ ಮರಣ ಹೊಂದಿದ್ದರೆ, ವಿಮೆ ಪಡೆಯುವ ಬಗೆ ಹೀಗಿದೆ. ವಿಮೆ ಕಂಪೆನಿಗೆ ದಾಖಲೆ ನೀಡಲೂ ಸಮಯ ಬೇಕಾಗುವುದು ಎಂದು ತಿಳಿಸಿ. ನಿಮ್ಮ ವಿಮೆ ಹಣ ಪಡೆಯಲು ಸಾಮಾನ್ಯವಾಗಿ ಮೂರು ವರ್ಷಗಳ ಸಮಯವಿರುತ್ತದೆ. ನೀವು ನಿಧಾನ ಮಾಡಿದಷ್ಟು ನಿಮಗೆ ಹಣ ಸೇರುವುದು ನಿಧಾನವಾಗುತ್ತದೆ.
 • ವಿಮೆ ಮಾಡಿಸದ ವ್ಯಕ್ತಿ ನಾಪತ್ತೆಯಾಗಿದ್ದಲ್ಲಿ , ಅವರ ಸಾವಿನ ಬಗ್ಗೆ ಯಾವುದೇ ಪುರಾವೆಗಳು ಇರದಿದ್ದಲ್ಲಿ ಇಂಡಿಯನ್ ಎವಿಡೆನ್ಸ್ ಆಕ್ಟ್ 107 ಮತ್ತು 108 ರಂತೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆಕ್ಟ್ 108ರ ಪ್ರಕಾರ ವ್ಯಕ್ತಿ ನಾಪತ್ತೆಯಾದ ಏಳು ವರ್ಷಗಳ ನಂತರ ಮಾತ್ರ ವಿಮೆ ಹಣಕ್ಕೆ ಅರ್ಜಿ ಸಲ್ಲಿಸಲು ನಾಮನಿರ್ದೇಶಿತರಿಗೆ ಅವಕಾಶವಿರುತ್ತದೆ. ಏಳು ವರ್ಷದ ಅವಯಲ್ಲಿ ಪಾಲಿಸಿ ರದ್ದಾಗದಂತೆ ನೋಡಿಕೊಳ್ಳಿ.
 • ವಿಮೆದಾರರು ವಿಮೆ ಮಾಡಿಸಿ ಅದು ನಾಮನಿರ್ದೇಶಿತರ ಕೈಗೆ ಸಿಗದಿದ್ದರೆ, ಅವರೆ ಖುದ್ದಾಗಿ ವಿಮೆ ಕಂಪೆನಿಗೆ ಪತ್ರ ಬರೆದು ವಿಮೆಯ ವಿವರವನ್ನು ಪಡೆಯಬಹುದು. ಈ ಸಂದರ್ಭದಲ್ಲಿ ವಿಮೆದಾರರ ಮರಣ ಪ್ರಮಾಣ ಪತ್ರ ಒದಗಿಸಬೇಕು. ಇದು ಮುನ್ಸಿಪಾಲಿಟಿ, ಗ್ರಾಮ ಪಂಚಾಯಿತಿ ನೀಡಿದ್ದಾಗಿರಬೇಕು.
 • ವಿಮೆ ವೇಗವಾಗಿ ಪಡೆಯಬೇಕಿದ್ದಲ್ಲಿ ಎಲ್ಲ ದಾಖಲೆಗಳನ್ನು ಎರೆಡೆರಡೂ ಬಾರಿ ಪರಿಶೀಲಿಸಿ.

ಬೇಕಾದ ಅಗತ್ಯ ದಾಖಲೆಗಳು:

 • ಪಾಲಿಸಿ ಮೂಲ ಪ್ರತಿ
 • ಭರ್ತಿ ಮಾಡಿದ ಕ್ಲೈಂ ಪ್ರತಿ
 • ನಾಮಿನಿಯ ಗುರುತು ಪತ್ರ, ನಾಮಿನಿ ಮತ್ತು ವಿಮೆದಾರರ ನಡುವಿನ ಸಂಬಂಧದ ದಾಖಲೆ
 • ಮರಣ ಪ್ರಮಾಣ ಪತ್ರ
 • ವೈದ್ಯಕೀಯ ಪ್ರಮಾಣ ಪತ್ರಗಳು
 • ಪೋಸ್ಟ್ ಮಾರ್ಟಮ್ ರಿಪೋರ್ಟ್
 • ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ ಎಫ್ಐಆರ್ ಪ್ರತಿ
 • ಪೊಲೀಸರು ವಿಚಾರಣೆ ನಡೆಸಿದ್ದಲ್ಲಿ ಪಂಚನಾಮೆ ವರದಿ ಪ್ರತಿ
 • ಬ್ಯಾಂಕ್ ಉಳಿತಾಯ ಖಾತೆ ಮಾಹಿತಿ
 • ನ್ಯೂಸ್ ಪೇಪರ್ ಕಟಿಂಗ್ಸ್ (ಇದ್ದಲ್ಲಿ)

Leave a Reply

error: Content is protected !!