ಬಾಯಿ ಹುಣ್ಣು ಗುಣ ಪಡಿಸುವ ಮನೆ ಮದ್ದುಗಳು

ಲೈವ್ ಕರ್ನಾಟಕ | ಶಿವಮೊಗ್ಗ

  • ಎಳೆಯ ತೊಂಡೆಕಾಯಿಯನ್ನು ಅಗೆದು ತಿಂದರೆ ಬಾಯಿಹುಣ್ಣು ಗುಣವಾಗುತ್ತದೆ.
  • ನಿಧಾನವಾಗಿ ಬಸಳೆಸೊಪ್ಪನ್ನು ಜಗೆದರೂ ಬಾಯಿಹುಣ್ಣು ಕಡಿಮೆಯಾಗುತ್ತದೆ.
  • ಬಾಯಿಹುಣ್ಣು ಶುರುವಾದ ತಕ್ಷ ಣ ನೇರಳೆ ಹಣ್ಣನ್ನು ತಿಂದರೆ ಬಾಯಿಹುಣ್ಣು ಅಲ್ಲೇ ಬತ್ತಿ ಹೊಗುತ್ತದೆ.
  • ಸೀಬೆ ಚಿಗುರಿನ ಕಷಾಯವನ್ನು ಉಪ್ಪಿನ ಜತೆ ಸೇರಿಸಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಬೇಗನೆ ಮಾಯುತ್ತದೆ.
  • ಏಲಕ್ಕಿ ಪುಡಿ ಹಾಗೂ ಜೇನುತುಪ್ಪ ಸೇರಿಸಿ ಬಾಯಿಹುಣ್ಣಿಗೆ ಲೇಪನ ಮಾಡಿದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ.
  • ಒಂದು ಲೋಟ ಹಾಲಿಗೆ ಒಂದು ಚಮಚ ಅಂಜೂರದ ತೊಗಟೆ ಪುಡಿ ಬೆರೆಸಿ ಕುಡಿದರೆ ಬಾಯಿಹುಣ್ಣು ಗುಣವಾಗುತ್ತದೆ.
  • ದಿನಕ್ಕೆ 5 ಗ್ರಾಂ ಮೆಣಸಿನ ಪುಡಿಯನ್ನು ತುಪ್ಪದ ಜತೆ ಕಲಸಿ ಸೇವಿಸಿದರೆ ಬಾಯಿಹುಣ್ಣು ಶಮನವಾಗುತ್ತದೆ.
  • ನಿಯಮಿತ ಪ್ರಮಾಣದಲ್ಲಿ ಸೊಗದೆ ಬೇರಿನ ಶರಬತ್‌ಗೆ ನೀರು ಸೇರಿಸಿ ಸೇವಿಸಿದರೆ ಬಾಯಿಹುಣ್ಣು ವಾಸಿಯಾಗುತ್ತದೆ.
  • ಮದರಂಗಿ ಎಲೆಗಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ಆ ಕಷಾಯದಲ್ಲಿ ಬಾಯಿಮುಕ್ಕಳಿಸಿದರೆ ಬಾಯಿಹುಣ್ಣು ಬೇಗ ಮಾಯುತ್ತದೆ.
  • ಬೂದುಕುಂಬಳದ ರಸದಿಂದ ಬಾಯಿಮುಕ್ಕಳಿಸಿದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ.
  • ನೀರಲ್ಲಿ ಹುಣಸೆ ಹಣ್ಣನ್ನು ರಾತ್ರಿ ನೆನೆಸಿ ಬೆಳಗ್ಗೆ ಅದನ್ನು ಕಿವುಚಿ ಸೋಸಿದ ರಸಕ್ಕೆ ಉಪ್ಪು ಸೇರಿಸಿ ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.
  • ಕೊತ್ತಂಬರಿ ಬೀಜವನ್ನು ಸಕ್ಕರೆ ಜತೆ ಅಗಿದರೂ ಬಾಯಿಹುಣ್ಣು ಕಡಿಮೆಯಾಗುತ್ತದೆ.

Leave a Reply

error: Content is protected !!