ಕನ್ನಡಕ್ಕೆ ಮತ್ತೊಂದು ನ್ಯೂಸ್ ಚಾನೆಲ್, ರವಿಕುಮಾರ್, ಮಾರುತಿ ಸಾರಥ್ಯದಲ್ಲಿ ‘ಫಸ್ಟ್ ನ್ಯೂಸ್’

ಬೆಂಗಳೂರು : ಕನ್ನಡ ಮೀಡಿಯಾ ಲೋಕದಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಪ್ರಶ್ನೆಗೆ, ಕೊನೆಗೂ ಉತ್ತರ ಸಿಕ್ಕಿದೆ. ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ, ಹೊಸ ನ್ಯೂಸ್​ ಚಾನೆಲ್ ಆರಂಭವಾಗುತ್ತಿದೆ. ಅದಕ್ಕೆ ಫಸ್ಟ್​ ನ್ಯೂಸ್​ ಅಂತಾ ಹೆಸರಿಡಲಾಗಿದೆ. NOTHING IS IMPOSSIBLE ಅನ್ನುವುದು ಚಾನೆಲ್​ನ ಟ್ಯಾಗ್ ಲೈನ್. ತುಂಬಾ ಸರಳ ಕಾರ್ಯಕ್ರಮದಲ್ಲಿ ಚಾನೆಲ್​​ನ ಲೋಗೋ ಬಿಡುಗಡೆ ಮಾಡಲಾಗಿದೆ.

ಕನ್ನಡ ಎಲೆಕ್ಟ್ರಾನಿಕ್ ಮೀಡಿಯಾ ವಲಯದಲ್ಲಿ, ರವಿಕುಮಾರ್​ ಮತ್ತು ಮಾರುತಿ ಅವರ ನ್ಯೂಸ್​​ ಚಾನೆಲ್​ನ ಬಗ್ಗೆ ತುಂಬಾನೇ ನಿರೀಕ್ಷೆಯಿದೆ. ನ್ಯೂಸ್​​ಗೆ ವಿಭಿನ್ನ ಶೈಲಿ, ಪ್ರೋಗ್ರಾಂಗಳಿಗೆ ಡೈನಾಮಿಕ್ ಟಚ್ ಕೊಡಲಿದ್ದಾರೆ ಎಂಬ ಮಾತುಗಳು ಇದ್ದಾವೆ. ಹೊಸ ಹೊಸ ಕಾನ್ಸೆಪ್ಟ್​ಗಳನ್ನು ಜನರ ಮುಂದಿಡಲಿದ್ದಾರೆ ಎಂಬ ಲೆಕ್ಕಾಚಾರವೂ ಇದೆ.

ಯಾವಾಗ ಆರಂಭವಾಗಲಿದೆ ಫಸ್ಟ್​ ನ್ಯೂಸ್​?

ಟಿವಿ9 ಕರ್ನಾಟಕದ ಬಗ್ಗೆ ಜನರಿಗೆ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ. ಟಿವಿ9ನ ಕಾರ್ಯಕ್ರಮಗಳು, ನ್ಯೂಸ್​ ಷೋಗಳ ಬಗ್ಗೆ, ವಿಧಾನಸಭೆಯಲ್ಲೂ ಚರ್ಚೆಯಾಗುತ್ತೆ, ಮನೆ ಮನೆಯಲ್ಲೂ ಚರ್ಚೆಯಾಗುತ್ತೆ. ಟಿವಿ9 ಸಂಸ್ಥೆ ಕರ್ನಾಟಕದಲ್ಲಿ ಈ ಮಟ್ಟಿಗೆ ಜನಪ್ರಿಯವಾಗಲು, ಹನ್ನೊಂದು ವರ್ಷ ನಂಬರ್ ಒನ್ ಚಾನೆಲ್ ಆಗಲಿ ಉಳಿಯಲು, ಪ್ರಮುಖ ಕಾರಣ,  ರವಿಕುಮಾರ್ ಮತ್ತು ಮಾರುತಿ ಎಂಬ ಲವಕುಶರು. ರವಿಕುಮಾರ್ ಅವರು ಟಿವಿ9 ಕರ್ನಾಟಕದ ಪ್ರಧಾನ ನಿರ್ಮಾಪಕರಾಗಿದ್ದರು, ಮಾರುತಿ ಅವರು ಎಗ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದರು. ಒಂದಿಡೀ ದಶಕ ಟಿವಿ9 ಸಂಸ್ಥೆಯನ್ನು ಮುನ್ನಡೆಸಿದ್ದು ಇವರೇ. ಆದರೆ, ಅಕ್ಟೋಬರ್ 14ನೇ ತಾರೀಖು ಈ ಜೋಡಿ ಟಿವಿ9 ತೊರೆದು ಹೊರಬಂದರು. ಹೊಸ ಯೋಜನೆ, ವಿನೂತನ ಹೆಜ್ಜೆಯೊಂದು ಅವರ ಕಲ್ಪನೆಯಲ್ಲಿತ್ತು. ಈಗ ಅದು ರೂಪ ಪಡೆಯುತ್ತಿದೆ. ಅದರ ಆರಂಭವೇ ಲೋಗೋ ಲಾಂಚ್​.

ರವಿಕುಮಾರ್ ಮತ್ತು ಮಾರುತಿ ಅವರು ಜೀ ನ್ಯೂಸ್ ಕನ್ನಡದ ಮುಖ್ಯಸ್ಥರಾಗಲಿದ್ದಾರೆ. ಎಬಿಪಿ ನ್ಯೂಸ್​ನ ಚೀಫ್​ಗಳಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದೆ, ಸೈಲೆಂಟಾಗಿಯೇ ಟೀಮ್ ರೆಡಿ ಮಾಡಿಕೊಂಡಿದ್ದಾರೆ. ಈಗ ಲೋಗೋ ಲಾಂಚ್ ಮಾಡಿದ್ದಾರೆ.

ಇನ್ನು, ಫಸ್ಟ್​ ನ್ಯೂಸ್​ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ, ಮೀಡಿಯಾ ವಲಯದಲ್ಲೂ ಇದೆ, ಜನರಲ್ಲೂ ಮೂಡಿದೆ. ಅಂದಹಾಗೆ, ಫಸ್ಟ್​ ನ್ಯೂಸ್​ 2018ರ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದ ವೇಳೆಗೆ ಉದ್ಘಾಟನೆಯಾಗಲಿದೆ ಎಂದು ತಿಳಿದು ಬಂದಿದೆ.

3 Comments

  1. Ananda February 20, 2018
  2. Ananda February 20, 2018
    • Mounesha April 5, 2018

Leave a Reply

error: Content is protected !!