ಆದಾಯ ತೆರಿಗೆ ಪಾವತಿಯಲ್ಲಿ ಧೋನಿ ನಂಬರ್ 1, ಅಷ್ಟಕ್ಕೂ ಅವರು ಕಟ್ಟಿದ ಟ್ಯಾಕ್ಸ್ ಎಷ್ಟು ಗೊತ್ತಾ?

ಲೈವ್ ಕರ್ನಾಟಕ.ಕಾಂ | ನ್ಯಾಷನಲ್ ಡೆಸ್ಕ್

ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದರ್ ಸಿಂಗ್ ಧೋನಿ, ಈ ಬಾರಿಯೂ ಕೋಟಿ ಕೋಟಿ ರೂಪಾಯಿಯನ್ನು ತೆರಿಗೆ ರೂಪದಲ್ಲಿ ಕಟ್ಟಿದ್ದಾರೆ. ಆದಾಯ ತೆರಿಗೆ ಇಲಾಖೆಯ ಬಿಹಾರ, ಜಾರ್ಖಂಡ್ ವಲಯದಲ್ಲಿ, ಧೋನಿಯೇ ಅತೀ ಹೆಚ್ಚು ಮೊತ್ತದ ತೆರಿಗೆ ಕಟ್ಟಿದವರಾಗಿದ್ದಾರೆ.

ಅಷ್ಟಕ್ಕೂ ಈ ಆರ್ಥಿಕ ವರ್ಷದಲ್ಲಿ ಮಹೇಂದರ್ ಸಿಂಗ್ ಧೋನಿ ಕಟ್ಟಿದ ತೆರಿಗೆ ಎಷ್ಟು ಗೊತ್ತಾ? ಬರೋಬರಿ 12.17 ಕೋಟಿ ರೂ. ಈ ವಲಯದಲ್ಲಿ ಇಷ್ಟೊಂದು ಮೊತ್ತದ ತೆರಿಗೆ ಕಟ್ಟಿದ ಏಕೈಕ ವ್ಯಕ್ತಿ ಮಹೇಂದರ್ ಸಿಂಗ್ ಧೋನಿ ಅಂತಾ, ಜಾಯಿಂಟ್ ಕಮಿಷನರ್ ನಿಷಾ ಒರಾನ್ ಸಿಂಗ್’ಮಾತ್ ತಿಳಿಸಿದ್ದಾರೆ.

ಕೋಟಿ ಕೋಟಿ ತೆರಿಗೆ ಕಟ್ಟಿದ್ದು ಇದೇ ಮೊದಲಲ್ಲ

ನಾಯಕನ ಪಟ್ಟ ತೊರೆದಿದ್ದರೂ ಮಹೇಂದರ್ ಸಿಂಗ್ ಧೋನಿ, ಬಿಸಿಸಿಐ ಲಿಸ್ಟ್’ನಲ್ಲಿ ಎ ಕೆಟಗರಿ ಆಟಗಾರನಾಗಿದ್ದಾರೆ. ಕ್ರಿಕೆಟ್’ನ ಆದಾಯ ಹೊರತುಪಡಿಸಿ, ಜಾಹೀರಾತುಗಳಿಂದಲೂ ಧೋನಿ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ. ಹಾಗಾಗಿ ಈ ಬಾರಿ ಅವರು ಕಟ್ಟಿದ ತೆರಿಗೆ ಮೊತ್ತ 12.17 ಕೋಟಿ ರೂ. ಆಗಿದೆ. ಕಳೆದ ಕೆಲವು ವರ್ಷದಿಂದಲೂ ಧೋನಿ ಕೋಟಿ ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ರೂಪದಲ್ಲಿ ಕಟ್ಟುತ್ತಿದ್ದಾರೆ.

ಇನ್ನು, ಕಳೆದ ಆರ್ಥಿಕ ವರ್ಷದಲ್ಲಿ ಮಹೇಂದರ್ ಸಿಂಗ್ ಧೋನಿ ಪಾವತಿಸಿದ ಆದಾಯ ತೆರಿಗೆ ಎಷ್ಟು ಗೊತ್ತಾ? ಬರೋಬರಿ 10.93 ಕೋಟಿ ರೂ. 2013 – 14ರಿಂದ ಈಚೆಗೆ ಮಹೇಂದರ್ ಸಿಂಗ್ ಧೋನಿ, ಅತೀ ಹೆಚ್ಚು ಆದಾಯ ತೆರಿಗೆ ಕಟ್ಟುತ್ತಿರುವ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.

Leave a Reply

error: Content is protected !!