ಮಗಳ ಜತೆಗಿನ ಫೋಟೋ ಹಾಕಿ ಟ್ರೋಲ್’ಗೆ ಗುರಿಯಾದ ನಟ ಅಮಿರ್ ಖಾನ್

ಲೈವ್ ಕರ್ನಾಟಕ.ಕಾಂ 

ಬಾಲಿವುಡ್ ನಟ ಅಮಿರ್ ಖಾನ್ ತನ್ನ ಮಗಳು ಇರಾ ಜತೆ ಆಟ ಆಡುತ್ತಿರುವ ಫೋಟೋ ಈಗ ಟ್ರೋಲ್’ಗೆ ಗುರಿಯಾಗಿದೆ. ಮಗಳು ಸಾಕರ್ ಗೇಮ್ ರೀತಿಯಲ್ಲಿ ತಂದೆಯನ್ನು ಅಟ್ಯಾಕ್ ಮಾಡುವ ರೀತಿ ತಮಾಷೆಯಲ್ಲಿ ತೊಡಗಿದ್ದಾರೆ. ಆದರೆ ಕೆಲವರು ಆಕೆಯ ಬಟ್ಟೆ ಬಗ್ಗೆ ಟೀಕೆಗಳ ಸುರಿಮಳೆಗೈದಿದ್ದಾರೆ. ಇನ್ನೂ ಕೆಲವರು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಮತ್ತೆ ಕೆಲವರು ರಂಜಾನ್ ತಿಂಗಳಲ್ಲಿ ಇಂತಹ ಉಡುಗೆ ತೊಡಬಾರದು ಎಂದಿದ್ದಾರೆ. ಬಹಳಷ್ಟು ಮಂದಿ ತಂದೆ ಮಗಳ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈವರೆಗೆ ನಟ ಅಮಿರ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Leave a Reply

error: Content is protected !!