ಮಂಡ್ಯದ ಕುಗ್ರಾಮಕ್ಕೆ ಬೆಳಕಾದ ನಟಿ ಅಲಿಯಾ ಭಟ್, 40 ಮನೆಗಳಿಗೆ ಸೋಲಾರ್ ವಿದ್ಯುತ್

ಲೈವ್‍ಕರ್ನಾಟಕ.ಕಾಂ

ಬಾಲಿವುಡ್ ನಟಿ ಅಲಿಯಾ ಭಟ್ ಮಂಡ್ಯದ ಕುಗ್ರಾಮದ 40 ಮನೆಗಳಿಗೆ ಬೆಳಕು ನೀಡುವ ಮೂಲಕ ಮಾದರಿಯಾಗಿದ್ದಾರೆ. ಎಲ್ಲಿಯ ಬಾಲಿವುಡ್ ಎಲ್ಲಿಯ ಮಂಡ್ಯ. ಸಹಾಯ ಮಾಡಲು ಯಾವ ಊರಾದರೇನು ಅಲ್ವ.
ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದ 40 ಮನೆಗಳಿಗೆ ಆಲಿಯ ಭಟ್ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ. ಮಿ ವಾರ್ಡ್ ರೋಬ್ ಇಸ್ ಸು ವಾರ್ಡ್ ರೋಬ್ ಎಂಬ ಹೆಸರಿನ ಅಭಿಯಾನದಲ್ಲಿ ತಮ್ಮ ವಿಶೇಷವಾದ ಬಟ್ಟೆಯನ್ನು ಹರಾಜಿಗೆ ಇಟ್ಟಿದ್ದರು. ಈ ಹಣದಿಂದ ಬಂದ ಹಣವನ್ನು ಬೆಂಗಳೂರಿನ ಎಆರ್ ಒಆರ್‍ಎಚ್ ಸಂಸ್ಥೆಗೆ ನೀಡಿದ್ದರು. ಈ ಸಂಸ್ಥೆ ಪ್ಲಾಸ್ಟಿಕ್ ಬಾಟಲ್‍ಗಳನ್ನು ಮರುಬಳಕೆ ಮಾಡಿ ಆರ್ಥಿಕವಾಗಿ ಹಿಂದುಳಿದ ಗ್ರಾಮಗಳಿಗೆ ಸೋಲಾರ್ ಲೈಟ್ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತದೆ.


ಚಾರಿಟಿಗಾಗಿ ಈ ಸಂಸ್ಥೆ ಅಲಿಯಾ ಭಟ್ ಸಂಪರ್ಕಿಸಿದಾಗ ಬಟ್ಟೆ ಮಾರಾಟದಿಂದ ಬಂದ ಹಣವನ್ನು ಈ ಸಂಸ್ಥೆಗೆ ನೀಡಿದ್ದರು. ಇದೇ ಹಣದಿಂದ ಮಂಡ್ಯದ ಕಿಕ್ಕೇರಿ ಗ್ರಾಮಕ್ಕೆ ಸೋಲಾರ್ ವಿದ್ಯುತ್ ಒದಗಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಅಲಿಯಾ ಭಟ್, ಭಾರತದ ಅನೇಕ ಕುಟುಂಬಗಳ ಕತ್ತಲೆಯಲ್ಲಿ ಜೀವಿಸುತ್ತಿವೆ. ಅವರ ಮನೆಗಳನ್ನು ಬೆಳಗಿಸಲು ಉತ್ತಮ ಮಾರ್ಗ ಇದಾಗಿದ್ದು, ಪರಿಸರ ಸ್ನೇಹಿಯಾಗಿದೆ. ಇದರಿಂದ ಜೀವನಮಟ್ಟ ಸುಧಾರಿಸುತ್ತದೆ ಎಂದಿದ್ದಾರೆ.

Leave a Reply

error: Content is protected !!